ಸೋಮವಾರ, ನವೆಂಬರ್ 16, 2009

ಹೀಗೊಂದು ಕೊಲೆ.

ಸರಿ, ನಾನೂ ಬರೆಯುತ್ತಿದ್ದೇನೆ ಕವಿತೆ.
ಪದಗಳ ಹಂಗಿಲ್ಲ, ಪ್ರಾಸ ಗೊತ್ತಿಲ್ಲ....
ಸ್ವಲ್ಪ ತ್ರಾಸಾದರು ಓದಿಕೊಳ್ಳಿ,
ಇದು ಮೊದಲ ಪ್ರಯತ್ನ.

ಆಯ್ತು, ವಿಷಯವಾದರೂ ಬೇಕಲ್ಲ ?
ತೆರೆದಿಟ್ಟುಕೊಂಡು ಕುಳಿತಿದ್ದೇನೆ ನೆನೆಪಿನ ಕಪಾಟು.
ಹುಡುಕುತ್ತಿದ್ದೇನೆ ಭಾವನೆಗಳನ್ನು..... ಕತ್ತಲಲ್ಲಿ.
ಛೆ! ಬರೆಯಲು ಯೋಗ್ಯವಾದದ್ದು ಯಾವುದು ಸಿಗುತ್ತಿಲ್ಲ.
ಸಹನೆ ತೀರಿ ಹೋಗುತ್ತಿದೆ.

ಕೈಗೆ ಸಿಗುವ ಭಾವವನ್ನು ಹಿಡಿದು, ಕೊಂದು
ಹಾಳೆಯ ಮೇಲೆ ಸಮಾಧಿ ಮಾಡಿ ಕವಿತೆಯನ್ನಾಗಿಸುವ
ಕ್ರೂರ ಹುನ್ನಾರ......... ಹೆಚ್ಚಾಗುತ್ತಿದೆ.
ಮನಸ್ಸು ಹುಚ್ಚಾಗುತ್ತಿದೆ.

ಅಯ್ಯೋ! ಬೇಡವೇ ಬೇಡ.
ಈ ಕವಿತೆಗಳ ಸಹವಾಸವೇ ಬೇಡ.
ಬರೆಯಲು ಕುಳಿತ ಮನಸ್ಸು ಕೊಲೆಗಾರನಾಗುತ್ತಿದೆ.
ಅಷ್ಟಕ್ಕೂ, ಭಾವನೆಗಳನ್ನು ಪದಗಳಿಗಿಳಿಸಹೋದರೆ-
- ಅದು ಕೊಲೆಯೇ..........

( P.S- ಕವಿತೆಗಳನ್ನು ಹೀಗೂ ಕೊಲೆಮಾಡಬಹುದು....ಹ್ಹೆ..ಹೇ...)

6 ಕಾಮೆಂಟ್‌ಗಳು:

ಅನಂತ ಹೇಳಿದರು...

ಚೆನ್ನಾಗಿದೆ ಭರತ್.. ಎಲ್ಲಾ ಪೋಸ್ಟ್ ಇವತ್ತು ಓದಿದೆ.. superr.. ಹೀಗೆ ಬರೀತಿರು.. :)

ಭರತ ಹೇಳಿದರು...

thanks ananta....

ಗೌತಮ್ ಹೆಗಡೆ ಹೇಳಿದರು...

chennagide ri:)

Unknown ಹೇಳಿದರು...

@ goutham.

dhanyavaadagalu kanri....

Unknown ಹೇಳಿದರು...

chanagide nimma kavithe.....
kavithe andre heege irbeku anno vadike meeri baredha nijvagiyu channagide.....

KAVITHEYA KOOLE YASHASHVIYAGIDE!!!!

kiran kodsara ಹೇಳಿದರು...

ಕವಿತೆಯ ಕೊಲೆಯಲ್ಲಿ ಅರಳಿದ ಕೊಳೆಯಿಲ್ಲದ ಕಲೆ ಬಹಳ ಸೊಗಸಾಗಿದೆ...