ಭಾನುವಾರ, ಮೇ 2, 2010

















೧.
ಕತ್ತಲು......
ಫ್ಯಾನು ತಿರುಗುತ್ತಿರುವುದೊಂದೇ ಜೀವಂತಿಕೆ ಸಂಕೇತ.
ಅಷ್ಟರಲ್ಲಿಯೇ ಹೊತ್ತಿತೊಂದು ಬೆಂಕಿ......ಮೂಡಿತೊಂದು ಕೆಂಪು.
ಅದರ ಹಿಂದೆಯೇ ಸುರುಳಿ ಸುರುಳಿಯಾಗಿ ಹೋಗೆ,
ಕವಿತೆ  ಹುಟ್ಟುವುದರೊಳಗೆ..........
ಉಳಿದಿದ್ದು ಬರೀ ಭೂದಿ, ಮತ್ತದೇ
ಕತ್ತಲು..................

೨.
ಎರಡು ಸಿಗರೇಟುಗಳ ಮದ್ಯೆ ಕಂಡಿದ್ದು.....
ಕಪ್ಪು ಮತ್ತು ಕೆಂಪು,
ಅಷ್ಟೇ.

೩.
ಮನದಲ್ಲಿದ್ದ ಭಾವನೆಗಳನ್ನು ಕವಿತೆಯಾಗಿಸಬೇಕೆಂದಿದ್ದೆ.
ಸಿಗರೇಟು ಹಚ್ಹ್ಚಿದೊಡನೆ.....
ಹೊಗೆಯಾಗಿ ಹಾರಿಹೋದವು.
ಬೂದಿಯಷ್ಟೇ ಉಳಿದಿದೆ.

೪.
ಮನದಲ್ಲಿ ಅವಳ ನೆನಪು, ಬಾಯಲ್ಲಿ ಸಿಗರೇಟು.
ಯಾವುದನ್ನು ಹೊತ್ತಿಸಲಿ....?
ಎರಡೂ ಸುಡುವುದು ನನ್ನನ್ನೇ.